"ನನ್ನ ಹೋರಾಟ ಕೋಮುವಾದದ ವಿರುದ್ಧ. ಮುಂದಿನ ಚುನಾವಣೆಯಲ್ಲಿ ಕೋಮು ರಾಜಕೀಯ ಗೆಲ್ಲಬಾರದು. ಅನಂತ ಕುಮಾರ ಹೆಗಡೆ, ಪ್ರತಾಪ್ ಸಿಂಹ, ಅಮಿತ್ ಶಾ ಇವರ ವಿರುದ್ಧವೇ ನನ್ನ ಹೋರಾಟ. ನಾವು ಆಯ್ಕೆ ಮಾಡುವಷ್ಟು ಅರ್ಹತೆ ಇವರಿಗಿಲ್ಲ" ಎಂದು ಬಹುಭಾಷಾ ನಟ- ನಿರ್ಮಾಪಕ ಪ್ರಕಾಶ್ ರೈ ಒನ್ಇಂಡಿಯಾ ಕನ್ನಡದ ಸಂದರ್ಶನದಲ್ಲಿ ಕಿಡಿ ಕಾರಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಸರಕಾರವನ್ನು ಟೀಕಿಸುವ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರದಿಂದ ಎಚ್ಎಸ್ಆರ್ ಲೇಔಟ್ ನಲ್ಲಿ ಸೈಟ್ ಪಡೆದುಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಿಬಿಡಲಾಗಿದೆ. ಇದು ನಿಜವೇ ಎಂಬುದು ಸೇರಿದಂತೆ ಉದಯವಾಣಿಯಲ್ಲಿ ಅವರ ಅಂಕಣವನ್ನು ದಿಢೀರ್ ನಿಲ್ಲಿಸಲು ಕಾರಣವೇನು ಎಂಬ ಪ್ರಶ್ನೆ ಮಾಡಲಾಯಿತು."ನನ್ನ ಪ್ರಶ್ನೆಗೆ ಉತ್ತರಿಸುವ ತಾಕತ್ತು ಇಲ್ಲದವರು ಇವನು ಇಂಥ ಪಕ್ಷದಿಂದ ಹಣ ಪಡೆದಿದ್ದಾನೆ, ಇಂಥ ಜಾತಿಯವನು, ಇಂಥ ಧರ್ಮದವನು, ಹಿಂದೂ ವಿರೋಧಿ ಹೀಗೆ ನಾನಾ ಆರೋಪಗಳನ್ನು ಮಾಡುತ್ತಾನೆ. ಏನಾದರೂ ಆರೋಪ ಮಾಡಿಕೊಳ್ಳಲಿ ಎಂದಿದ್ದಾರೆ .
Prakash Rai's opens up about his recent Controversies with State and central politics in an exclusive interview with Oneindia Kannada.